top of page

ಶಿಕ್ಷಣವನ್ನು ಮಕ್ಕಳ ಮೂಲಭೂತ ಹಕ್ಕನ್ನಾಗಿಸಲು ಸರ್ಕಾರ ಮತ್ತು ಸಂಘ ಸಂಸ್ಥೆಗಳ ಪಾತ್ರ


ನಮ್ಮ ಸಂವಿಧಾನದ ಅನುಚ್ಛೇದ 21a ನಲ್ಲಿ ತಿಳಿಸಿರುವಂತೆ ಶಿಕ್ಷಣ ಮಕ್ಕಳ ಮೂಲಭೂತ ಹಕ್ಕು, ಇದನ್ನು ಸಾಕಾರಗೊಳಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಲವಾರು ಯೋಜನೆಗಳ ಮೂಲಕ ಪ್ರಯತ್ನಿಸುತ್ತಿರುವುದು ತುಂಬಾ ಶ್ಲಾಘನೀಯ ವಿಷಯವಾಗಿದೆ. ಸರ್ಕಾರಗಳು ಎಷ್ಟೇ ಪ್ರಯತ್ನಿಸಿದರೂ ಅದರ ನಿರೀಕ್ಷಿತ ಗುರಿ ತಲುಪಲು ಇನ್ನೂ ಸಾಧ್ಯವಾಗುತ್ತಿಲ್ಲ, ಇನ್ನೂ ಕೂಡ ಗ್ರಾಮೀಣ ಪ್ರದೇಶಗಳಲ್ಲಿ, ಬುಡಕಟ್ಟು ಸಮುದಾಯಗಳಲ್ಲಿ, ನಗರದ ಕೊಳಚೆ ಪ್ರದೇಶಗಳಲ್ಲಿ ಮಕ್ಕಳು ಶಿಕ್ಷಣದಿಂದ ವಂಚಿತರಾಗಿ ಶಾಲೆಯಿಂದ ಹೊರಗುಳಿದಿರುವುದು ಕಂಡುಬಂದಿರುತ್ತದೆ. ಇದಕ್ಕೆ ಕಾರಣಗಳು ಹಲವಾರು ಇರಬಹುದು ಅಂದರೆ ವಲಸೆ, ಪೋಷಕರ ಭಾಗವಹಿಸುವಿಕೆ, ಶಿಕ್ಷಣದ ಮಹತ್ವದ ಅರಿವಿನ ಕೊರತೆ. ಆದರೆ ಇವೆಲ್ಲವನ್ನೂ ಮೀರಿ ಮಗುವಿಗೆ 6 ರಿಂದ 14 ವರ್ಷದ ತನಕ ಶಿಕ್ಷಣ ನೀಡುವುದು ಸರ್ಕಾರ ಹಾಗೂ ಪೋಷಕರ ಆದ್ಯಕರ್ತವ್ಯ.


ಸರ್ಕಾರ 2009 ನೇ ಇಸವಿಯಲ್ಲಿ ಜಾರಿಗೆ ತಂದ ಶಿಕ್ಷಣ ಹಕ್ಕು ಕಾಯ್ದೆ, ಶಿಕ್ಷಣ ಮಕ್ಕಳ ಮೂಲಭೂತ ಹಕ್ಕು ಎಂದು ಹೇಳಿದೆ. ಈ ಮೂಲಕ ಶಿಕ್ಷಣವನ್ನು ಮಕ್ಕಳ ಮೂಲಭೂತ ಹಕ್ಕನ್ನಾಗಿಸಿದ ಜಗತ್ತಿನ 135 ದೇಶಗಳ ಪಟ್ಟಿಯಲ್ಲಿ ಭಾರತ ದೇಶ ಕೂಡ ಒಂದಾಗಿದೆ. ಆದರೆ ಇದರ ಅನುಷ್ಠಾನ ಇನ್ನೂ ಗಟ್ಟಿಯಾಗಬೇಕಾಗಿದೆ.


ಅದೇರೀತಿ ಈ ಕಾಯ್ದೆ ಉದ್ದೇಶ ಯಶಸ್ವಿಯಾಗಬೇಕಾದರೆ ಕೇವಲ ಸರ್ಕಾರವೊಂದೇ ಪ್ರಯತ್ನಿಸಿದರೆ ಸಾಲದು, ಇದರ ಜೊತೆಗೆ ಸಹಕಾರ, ಸಹಾಯ ನೀಡಬೇಕಾಗಿರುವುದು ದೇಶದ ನಾಗರಿಕ ಸಮಾಜದ ಜವಾಬ್ದಾರಿಯೂ ಕೂಡ. ಈ ಮೂಲಕ ಉಚಿತ ಮತ್ತು ಕಡ್ಡಾಯ ಶಿಕ್ಷಣ ಕಾಯ್ದೆ 2009ರ ಉದ್ದೇಶ ಸಾಧನೆಗಾಗಿ ದೇಶದಲ್ಲಿ ಹಾಗೂ ರಾಜ್ಯದಲ್ಲಿ ಹಲವಾರು ಸರ್ಕಾರೇತರ ಸಂಸ್ಥೆಗಳು, ಸ್ವಯಂ ಸೇವಕರು ಹಾಗೂ ಸಂಘಸಂಸ್ಥೆಗಳು ಸರ್ಕಾರದೊಂದಿಗೆ ಕೈಜೋಡಿಸಿ ಕೆಲಸ ನಿರ್ವಹಿಸುತ್ತಿವೆ. ಅವುಗಳಲ್ಲಿ ಮೇಘಶಾಲಾ ಟ್ರಸ್ಟ್ ಬೆಂಗಳೂರು ಕೂಡ ಒಂದಾಗಿದೆ.


ಸರ್ಕಾರೇತರ ಸಂಸ್ಥೆಗಳು ಎಂದರೆ ಕೇವಲ ಸೇವಾ ಮನೋಭಾವ ಹೊಂದಿರುವ ವ್ಯಕ್ತಿಗಳ ಗುಂಪಲ್ಲ ಹಲವಾರು ಕ್ಷೇತ್ರಗಳಲ್ಲಿ ಕೆಲಸ ನಿರ್ವಹಿಸಿರುವ ಅನುಭವ, ತಳಮಟ್ಟದಲ್ಲಿ ಕೆಲಸಮಾಡಿದ ತಜ್ಞರು ಕೂಡ ಈ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಇವರೆಲ್ಲರೂ ಅನುಭವ ಜ್ಞಾನ ಸರ್ಕಾರಕ್ಕೆ ಈ ಮೂಲಕ ತುಂಬಾ ಅವಶ್ಯಕತೆ ಇದೆ ಎನ್ನುವುದು ನನ್ನ ಅಭಿಪ್ರಾಯ.


ಸರ್ಕಾರ NGOs ಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಮೂಲಕ ಅವರ ತಳಮಟ್ಟದ ಅನುಭವ ಪಡೆದುಕೊಳ್ಳಬಹುದು, ಈ ಮೂಲಕ ಸರ್ಕಾರ ಖಾಸಗಿ ಕಂಪನಿಗಳಿಂದ ಸಂಪನ್ಮೂಲ ಕೂಡ ಪಡೆದುಕೊಳ್ಳಬಹುದು. ದೇಶ ಮತ್ತು ರಾಜ್ಯದಲ್ಲಿ ಎಷ್ಟು ಸರ್ಕಾರೇತ್ತರ ಸಂಸ್ಥೆಗಳು ಖಾಸಗಿ ಕಂಪನಿಯವರ ಸಹಕಾರದೊಂದಿಗೆ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸಿದ ಹಲವಾರು ಉದಾಹರಣೆಗಳಿವೆ. ಸರ್ಕಾರ ಹಾಗೂ ಸಾರ್ವಜನಿಕ ಭಾಗವಹಿಸುವಿಕೆ ಮೂಲಕ ಈ ಕಾಯ್ದೆ ಉದ್ದೇಶ ಸಾಧನೆಗೆ ಪ್ರಯತ್ನಿಸಬಹುದು.


ಸರ್ಕಾರ ಪ್ರಸ್ತುತ NGOs ಬಳಸಿಕೊಳ್ಳುತ್ತಿರುವುದು ಗಮನಿಸಿದಾಗ ಸ್ವಲ್ಪ ಸಮಾಧಾನಕರವಾಗಿದ್ದರೂ ಅಷ್ಟೊಂದು ತೃಪ್ತಿದಾಯಕವಾಗಿಲ್ಲ. ಇಲ್ಲಿ ಬೇಕಾಗಿರುವುದು ಕೇವಲ ಶಿಕ್ಷಕರ ಸಹಕಾರ ಅಷ್ಟೇ ಅಲ್ಲ, ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಜಿಲ್ಲಾ ಮಟ್ಟದ ಅಧಿಕಾರಿಗಳು, ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ರಾಜ್ಯ ಮಟ್ಟದ ಅಧಿಕಾರಿಗಳು ಸಲಹೆ, ಮಾರ್ಗದರ್ಶನಗಳಿಗೆ ತುಂಬಾ ಅವಶ್ಯಕತೆ ಇದೆ.


ತಮಗೆಲ್ಲ ತಿಳಿದಿರುವ ಹಾಗೆ ಇಲಾಖೆಯ ಅಧಿಕಾರಿಗಳು ಹಲವಾರು ಜವಾಬ್ದಾರಿಗಳಿರುತ್ತವೆ ಇವುಗಳ ಮಧ್ಯೆ ಶಿಕ್ಷಣ ಕ್ಷೇತ್ರಕ್ಕೆ ಕೆಲಸ ಮಾಡುತ್ತಿರುವ ಸಂಘ ಸಂಸ್ಥೆಗಳನ್ನು ಗುರುತಿಸಿ, ಅವರಿಗೆ ಅವಶ್ಯಕತೆ ಸೂಚನೆ, ಮಾರ್ಗದರ್ಶನ ನೀಡಿ ಅವರ ತಳಮಟ್ಟದ ಅನುಭವ, ಮಾನವ ಸಂಪನ್ಮೂಲವನ್ನು ಗರಿಷ್ಠಮಟ್ಟದಲ್ಲಿ ಬಳಕೆ ಮಾಡಿಕೊಂಡು ಕಾಯ್ದೆಯ ಉದ್ದೇಶ ಈಡೇರಿಕೆಗೆ ಸರಕಾರ ಪ್ರಯತ್ನ ಮಾಡಿದರೆ ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಸಂಸ್ಥೆಗಳು ಇನ್ನೂ ಕ್ರಿಯಾಶೀಲವಾಗಿ ತಮ್ಮನ್ನು ತೊಡಗಿಸಿಕೊಂಡು, ಕಾಯ್ದೆಯ ಉದ್ದೇಶ ಈಡೇರಿಕೆಗೆ ಪೂರಕವಾಗಿ ಕಾರ್ಯನಿರ್ವಹಿಸಬಹುದು. ಅದೇ ರೀತಿ ಇಲಾಖೆ ಅಧಿಕಾರಿಗಳು ಸಂಸ್ಥೆಗಳ ಅಗತ್ಯ ಸಹಕಾರ ಮತ್ತು ಸಂಸ್ಥೆಗಳ ನೀಡುತ್ತಿರುವ ಸೇವೆಗಳ ಬಗ್ಗೆ ನಿರಂತರ ಮೌಲ್ಯಮಾಪನ ಮಾಡಿದಾಗ ಮಾತ್ರ ಕ್ಷೇತ್ರದ ಏಳಿಗೆಗೆ ಮತ್ತಷ್ಟು ಬಲ ಹಾಗೂ ಪುಷ್ಟಿ ನೀಡಿದಂತ್ತಾಗುತ್ತದೆ.


- By Raghavendra B.K., Implementation Associate - Karnataka

Meghshala


23 views0 comments

Recent Posts

See All
bottom of page